ದತ್ತು ಪ್ರಕ್ರಿಯೆ

ಯೋಜನೆಯ ವಿಧಾನ

ನಮ್ಮ ರಾಜ್ಯ-ರಕ್ಷಿತ ಸ್ಮಾರಕಗಳ ಹೆಚ್ಚಿನ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (DAMH) ರವರು ಸದರಿ ಸ್ಮಾರಕಗಳ ಸಂರಕ್ಷಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕೆಲಸಗಳನ್ನು ನಾವು ಮುಂದುವರಿಸಬೇಕು ಮತ್ತು ಉತ್ತಮಗೊಳಿಸಬೇಕಾಗಿರುತ್ತದೆ. ನಾವು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಸುರಕ್ಷತೆಯನ್ನು ಖಾತರಿಗೊಳಿಸುವುದು ಹಾಗೂ ಬೆಳಕಿನ ಮತ್ತು ರಾತ್ರಿ ಪ್ರವಾಸಗಳಂತಹ ಹೊಸ ಅನುಭವಗಳನ್ನು ಸೃಜಿಸಬೇಕಾಗಿರುತ್ತದೆ.

ಈ ಸುಧಾರಣೆಗಳು DAMH, ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇವುಗಳನ್ನು ನೆರವೇರಿಸಲು, ಸದರಿ ಯೋಜನೆಯು, ಸೌಲಭ್ಯಗಳ ಅಭಿವೃದ್ಧಿ, ನಿರ್ಮಾಣ ಮತ್ತು ಸೌಲಭ್ಯಗಳ ಉನ್ನತೀಕರಣ, ಹಾಗೆಯೇ ಅವುಗಳ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನಮ್ಮ ಸ್ಮಾರಕ ಉಪಕ್ರಮದ ಮೂಲಕ ಆಯ್ಕೆಯಾದ ಅರ್ಜಿದಾರರಿಗೆ ವರ್ಗಾಯಿಸಲು ಯೋಜಿಸಿದೆ. ಆರಂಭದಲ್ಲಿ ಇದು ಐದು ವರ್ಷಗಳವರೆಗೆ ಇರುತ್ತದೆ ಮತ್ತು ಪ್ರವಾಸಿಗರು ಸೇರಿದಂತೆ ಎಲ್ಲಾ ಪಾಲುದಾರರ ಅಭಿಪ್ರಾಯಗಳ ಆಧಾರದ ಮೇಲೆ ನಿಯಮಿತವಾಗಿ ಪರಾಮರ್ಶಿಸಲಾಗುವುದು ಹಾಗೂ ಮೇಲ್ವಿಚಾರಣೆ ಮಾಡಲಾಗುತ್ತದೆ.

ಹಂತ 1: ESG ಯನ್ನು ಮಾನದಂಡವಾಗಿ ಪರಿಗಣಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು

ಸ್ಥಳದ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ, ಜನರ ಪುನರಾವರ್ತಿತ ಭೇಟಿಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಬಾಯಿಂದ ಬಾಯಿಗೆ ಹರಡುವ ಸಕಾರಾತ್ಮಕ ಪ್ರಚಾರವನ್ನು ಉಂಟುಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಮೂಲಭೂತ ಸೌಕರ್ಯಗಳು ಅತ್ಯಗತ್ಯವಾಗಿರುತ್ತವೆ. ಪ್ರವಾಸಿಗರ ಪ್ರತಿ ಭೇಟಿಯು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುವ ಕಾರಣ, ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಿರ್ಣಾಯಕವಾಗಿರುತ್ತದೆ. ಪ್ರಸ್ತುತ ಆಯೋಜಿತ ಯೋಜನೆಯು, ಎಲ್ಲಾ ಸಮಯದಲ್ಲೂ ಆರ್ಥಿಕವಾಗಿ ಪರಿಣಾಮಕರವೆಂದು/ಅನುಕೂಲಕರವೆಂದು ತೋರದಿದ್ದರೂ ಸಹ, ಸದರಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿರುತ್ತದೆ. ಪ್ರವಾಸಿ ಪ್ರದೇಶಗಳ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಸೂಚಕ ಪಟ್ಟಿ ಈ ಕೆಳಗಿನಂತಿದೆ:

ESG ಪರಿಣಾಮ

ಪರಿಸರ

ಸಾಮಾಜಿಕ

ಆಡಳಿತ

ಈ ಸೌಕರ್ಯಗಳು ಪ್ರವಾಸಿಗರಿಗೆ ಆರಾಮದಾಯಕ ಮತ್ತು ಆನಂದದಾಯಕ ಅನುಭವವನ್ನು ಖಚಿತಪಡಿಸುತ್ತದೆ ಹಾಗೂ ಅಂತಿಮವಾಗಿ ಸ್ಥಳೀಯ ಸಮುದಾಯ ಮತ್ತು ಆರ್ಥಿಕತೆಗೆ ಅನುಕೂಲತೆಯನ್ನು ಒದಗಿಸುತ್ತದೆ.

ಹಂತ 2: ಸಂರಕ್ಷಣಾ ಚಟುವಟಿಕೆಗಳು

ಸ್ಮಾರಕದ ಸ್ಥಳದಲ್ಲಿನ ಸಂರಕ್ಷಣಾ ಕಾರ್ಯವು ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆ ಮತ್ತು ಸ್ಮಾರಕ ಮಿತ್ರ ನಡೆಸಿದ ಇತರೇ ಅಗತ್ಯ ವಿಶ್ಲೇಷಣಾ ಸಂಶೋಧನೆಗಳನ್ನು ಆಧರಿಸಿದೆ. ಸಂರಕ್ಷಣಾ ಚಟುವಟಿಕೆಗಳನ್ನು, ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ (DAMH) ಮತ್ತು ಇತರ ಸಂಬಂಧಿತ ನೋಡಲ್ ಇಲಾಖೆಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗುತ್ತದೆ.

ಸ್ಮಾರಕ ಮಿತ್ರ ಪರಿಕ್ರಮವು, ಭಾರತ ಸರ್ಕಾರದ, ಕೇಂದ್ರ ಲೋಕೋಪಯೋಗಿ ಇಲಾಖೆ, ಮಹಾನಿರ್ದೇಶನಾಲಯವು ಪ್ರಕಟಿಸಿದ “ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಕೈಪಿಡಿ”ಯ ಇತ್ತೀಚಿನ ಆವೃತ್ತಿಯನ್ನು ಉಲ್ಲೇಖಿಸುತ್ತದೆ.

ಸ್ಮಾರಕ ಸ್ಥಳದಲ್ಲಿ ಪಾರಂಪರಿಕ ಸಂರಕ್ಷಣಾ ಕಾರ್ಯಗಳನ್ನು ಸಮೀಪಿಸುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು:

  1. ಅಗತ್ಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸ್ಥಳೀಯ ಪದ್ಧತಿಗಳನ್ನು ಪ್ರೋತ್ಸಾಹಿಸಸುವುದು.
  2. ASI (ಎಎಸ್ಐ), DAMH (ಡಿಎಎಂಎಚ್) ಮತ್ತು ಇತರ ಸರ್ಕಾರಿ ಅಥವಾ ಸರ್ಕಾರೇತರ ಏಜೆನ್ಸಿಗಳಿಂದ ರಕ್ಷಿಸಲ್ಪಟ್ಟ ಕಟ್ಟಡಗಳು ಮತ್ತು ಸೈಟ್‌ಗಳಿಗೆ, ಅಧಿಕೃತ ಮತ್ತು ಶಾಸನಬದ್ಧ ಸಂರಕ್ಷಣಾ ಸಾಧನಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟಿರುವ ಪದ್ಧತಿಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು.
  3. ಸಂಬಂಧಪಟ್ಟ ಪಾರಂಪರಿಕ ಕಟ್ಟಡದ ಗ್ರೇಡ್ ಅನ್ನು ಪರಿಗಣಿಸಿ ಹಾಗೂ ಸೂಕ್ತ ರೀತಿಯ ಅಧ್ಯಯನಗಳನ್ನು ಕೈಗೊಂಡು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಎಲ್ಲಾ ಬಗೆಯ ಅನುಮತಿಗಳನ್ನು ಪಡೆಯುವುದು.
  4. ಪಾರಂಪರಿಕ ಕಟ್ಟಡಗಳು, ಪಾರಂಪರಿಕ ಸ್ಮಾರಕಗಳ ಆವರಣಗಳು ಮತ್ತು ನೈಸರ್ಗಿಕ ವೈಶಿಷ್ಟ್ಯವುಳ್ಳ ಪ್ರದೇಶಗಳಿಗೆ ನಿರ್ದಿಷ್ಟವಾದ ಮಾದರಿ ಕಟ್ಟಡ ಉಪ-ಕಾನೂನುಗಳನ್ನು ಅನುಸರಿಸುವುದು ಮತ್ತು ಸಂಬಂಧಪಟ್ಟ ಪ್ರಾಧಿಕಾರದಿಂದ ಅಗತ್ಯ ಅನುಮತಿಗಳನ್ನು ಪಡೆಯುವುದು.
  5. ಯಾವುದೇ ಇತರ ಸಂಬಂಧಿತ ಕಾಯಿದೆಗಳು, ನಿಯಮಗಳು, ಮಾರ್ಗಸೂಚಿಗಳು ಅಥವಾ ಅಧಿಸೂಚನೆಗಳೊಂದಿಗೆ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆಯನ್ನು ಅಧ್ಯಯನ ಮಾಡುವುದು. ಯಾವುದೇ ಉದ್ದೇಶಿತ ಕೆಲಸಗಳಿಗೆ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಬಹುದೆಂಬುದನ್ನು ಖಚಿತಪಡಿಸಿಕೊಳ್ಳಲು ನೋಡಲ್ ಇಲಾಖೆಗಳಿಗೆ ಎಲ್ಲಾ ಸಂಬಂಧಿತ ಷರತ್ತುಗಳನ್ನು ಹೈಲೈಟ್ ಮಾಡಬೇಕಾಗಿರುತ್ತದೆ.