ನಮ್ಮ ಸ್ಮಾರಕ ಯಾತ್ರೆ

ಮಾನ್ಯ ಮುಖ್ಯಮಂತ್ರಿಗಳಾದ, ಶ್ರೀ ಸಿದ್ದರಾಮಯ್ಯ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು, ನ್ಯಾಯ, ಮಾನವ ಹಕ್ಕುಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರಿಂದ ಸೆಪ್ಟೆಂಬರ್ 25, 2023 ರಂದು ವಿಧಾನಸೌಧದಲ್ಲಿ ಪ್ರಾರಂಭವಾದ ನಮ್ಮ ಸ್ಮಾರಕ ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಪ್ರಚುರಪಡಿಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿರುತ್ತದೆ. ನಮ್ಮ ಸ್ಮಾರಕ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದ್ದು, ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮೀಸಲಾಗಿರುತ್ತದೆ. ಇದು ಕರ್ನಾಟಕದ ಐತಿಹಾಸಿಕ ಸಂಪತ್ತನ್ನು ಸಂರಕ್ಷಿಸುವ ಮತ್ತು ವರ್ಧಿಸುವಲ್ಲಿ ಮತ್ತು ರಾಜ್ಯವನ್ನು ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ. ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವರಾದ ಡಾ.ಎಚ್.ಕೆ.ಪಾಟೀಲ್ ರವರು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಈ ರೀತಿಯ ಐತಿಹಾಸಿಕ ನಮ್ಮ ಸ್ಮಾರಕ ಯಾತ್ರೆಯನ್ನು ಯೋಜಿಸಿ ಪ್ರಾರಂಭಿಸಿದ್ದಾರೆ.

6-8 ನವೆಂಬರ್ 2023

ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯಾತ್ರೆ ಮತ್ತು ಅನ್ವೇಷಣೆಗಳು

ಉದ್ಘಾಟನಾ ಯಾತ್ರೆಯು, ಐತಿಹಾಸಿಕವಾಗಿ ಶ್ರೀಮಂತ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿಗಳ ಮೂಲಕ ಮೂರು ದಿನಗಳ ಪ್ರಯಾಣದ ಹಾದಿಯಲ್ಲಿ, ಪ್ರಾಚೀನ ಕರೇಜ್ ಭೂಗತ ನೀರಿನ ವ್ಯವಸ್ಥೆ, ನಾಗಾವಿಯಲ್ಲಿನ ಕನ್ನಡದ ಮೊದಲ ವಿಶ್ವವಿದ್ಯಾಲಯ ಮತ್ತು ಇತರ ಮಹತ್ವದ ಪರಂಪರೆಯ ಸ್ಮಾರಕಗಳ ಬಗ್ಗೆ, ಗಮನಾರ್ಹವಾದ ಪುರಾತತ್ವ ಒಳನೋಟಗಳನ್ನು ಅನಾವರಣಗೊಳಿಸಿತು.

2

ಡಿಸಿ ಕಚೇರಿಗಳಿಗೆ ಭೇಟಿ

16

ಸ್ಮಾರಕಗಳ ಭೇಟಿ

35

ಇತಿಹಾಸಕಾರರ ಸಂಪರ್ಕ

1200+

ಸ್ಥಳೀಯ ಸಂವಹನಗಳು

3

ಪತ್ರಿಕಾಗೋಷ್ಠಿಗಳು

7

ದತ್ತು ಪಡೆದ ಸ್ಮಾರಕಗಳು

Karnataka: Tourism minister seeks public support to protect monuments

H.K. Patil criticises Centre for ignoring drought situation in Karnataka

ರಾಜ್ಯದ 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದೆ: ಸಚಿವ ಹೆಚ್ ಕೆ ಪಾಟೀಲ್

Government to protect 5,000 monuments in the first phase

20-22 ನವೆಂಬರ್ 2023

ವಿಜಯಪುರ ಮತ್ತು ಬಾಗಲಕೋಟೆಗಳಲ್ಲಿ ಯಾತ್ರೆ ಮತ್ತು ಅನ್ವೇಷಣೆಗಳು

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಜರುಗಿದ ಎರಡನೇ ಯಾತ್ರೆಯು, ಭವ್ಯವಾದ ಗಗನ್ ಮಹಲ್ ಸೇರಿದಂತೆ ವಿಜಯಪುರದ ಐತಿಹಾಸಿಕ ಸಂಪತ್ತನ್ನು ಹೊರತೆಗೆಯಿತು ಮತ್ತು ಬಾಗಲಕೋಟೆಯಲ್ಲಿ ಸ್ಮಾರಕಗಳ ಸ್ಥಳಗಳನ್ನು ಅತಿಕ್ರಮಿಸಿಕೊಂಡಿದ್ದ ವ್ಯಕ್ತಿಗಳ ಪುನರ್ವಸತಿಯನ್ನು ಪ್ರಾರಂಭಿಸಿತು.

3

ಡಿಸಿ, ಎಸಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಭೇಟಿ

23

ಸ್ಮಾರಕಗಳ ಭೇಟಿ

55

ಇತಿಹಾಸಕಾರರ ಸಂಪರ್ಕ

1400+

ಸ್ಥಳೀಯ ಸಂವಹನಗಳು

3

ಪತ್ರಿಕಾಗೋಷ್ಠಿಗಳು

1

ದತ್ತು ಪಡೆದ ಸ್ಮಾರಕ