ಪಾಲುದಾರರು
ಯೋಜನಾ ನಿರ್ವಹಣಾ ಘಟಕ
ಕಲ್ಕಿ ಫೌಂಡೇಶನ್ – 2019 ರಲ್ಲಿ ಸ್ಥಾಪಿತವಾಗಿದ್ದು, ಹಾಗೂ 80G ನಿಯಮಗಳಿಗೆ ಅನುಗುಣವಾಗಿ ನೋಂದಾಯಿತ ಲಾಭರಹಿತ ಸಂಸ್ಥೆಯಾಗಿದೆ. ಸ್ಥಳೀಯ ಪರಂಪರೆಯ ಸಂರಕ್ಷಣೆ ಮತ್ತು ಜಾಗತಿಕ ಪ್ರಜ್ಞೆಯ/ಅರಿವಿನ ನಡುವಿನ ಅಂತರದ ಸೇತುವೆಯಂತೆ ಕೆಲಸ ಮಾಡಲು ನಾವು ಸ್ಥಳೀಯ ಸರ್ಕಾರ, ಸಮುದಾಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಹಕರಿಸುತ್ತೇವೆ. ಇದಲ್ಲದೆ, ನಾವು ತಂತ್ರಜ್ಞಾನ ಮತ್ತು ಸಂಶೋಧನಾ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತೇವೆ, ಸಂಸ್ಕೃತಿ-ತಂತ್ರಜ್ಞಾನದ ಅಡಿಪಾಯವಾಗಿ ನಮ್ಮನ್ನು ನಾವು ಇರಿಸಿಕೊಳ್ಳುತ್ತೇವೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಕರ್ನಾಟಕವು ತನ್ನ 848 ರಾಜ್ಯ-ರಕ್ಷಿತ ಸ್ಮಾರಕಗಳಲ್ಲಿ 530 ಸ್ಮಾರಕಗಳಲ್ಲಿ 3D ಸ್ಕ್ಯಾನಿಂಗ್ ಅನ್ನು ಪೂರ್ಣಗೊಳಿಸಿದ ಭಾರತದ ಮೊದಲ ರಾಜ್ಯವಾಗುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಈ ಮುಂಚೂಣಿಯ ಪ್ರಯತ್ನವು ಸಂಸ್ಕೃತಿ ಪರಂಪರೆಯ ಡಿಜಿಟಲ್ ಸಂರಕ್ಷಣೆಗೆ ಪ್ರಮುಖ ಹೆಜ್ಜೆಯಾಗಿದ್ದು, ಈ ಐತಿಹಾಸಿಕ ತಾಣಗಳ ವಿವರಗಳನ್ನು ಸವಿವರವಾಗಿ ದಾಖಲಿಸಿ ಮುಂದಿನ ಪೀಳಿಗೆಗಳಿಗೆ ಸಂರಕ್ಷಣೆಯನ್ನು ಖಾತರಿಗೊಳಿಸಲಾಗುತ್ತಿದೆ. 3D ಸ್ಕ್ಯಾನ್‌ಗಳು, ಪುನರುತ್ಥಾನ ಯೋಜನೆಗಳು, ಶೈಕ್ಷಣಿಕ ಉದ್ದೇಶಗಳು ಮತ್ತು ವರ್ಚುವಲ್ ಪ್ರವಾಸೋದ್ಯಮಗಳಲ್ಲಿ ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುವಲ್ಲಿ ಅಮೂಲ್ಯವಾದ ಸಂಪನ್ಮೂಲವನ್ನು ಒದಗಿಸುತ್ತವೆ.
